ದೇಹಕ್ಕೆ ತಂಪು ನೀಡುವ ಮೆಂತ್ಯ ದೋಸೆ ಮಾಡಿ. ಸುಲಭ ವಿಧಾನ!

ಕೆಲವು ಮಹಿಳೆಯರಿಗೆ ಬೆಳಗ್ಗೆ ತಿಂಡಿ ಏನು ಮಾಡಲಿ ಎಂಬ ಯೋಜನೆ ಶುರುವಾಗುತ್ತದೆ. ಅದರಲ್ಲೂ ಹೆಚ್ಚು ಮಹಿಳೆಯರು ಮನೆಯಲ್ಲಿ ಬೆಳಿಗ್ಗೆ ತಿಂಡಿ ಮಾಡುದೇ ಎಲ್ಲರಿಗೂ ಇಷ್ಟವಾಗುವಂತಹ ದೋಸೆ. ನೀವು ದೋಸೆಯಲ್ಲಿ ಹತ್ತು ಹಲವು ರೀತಿಯ ಬಗೆ ನೋಡಿರಬಹುದು. ಮನೆ ಮಂದಿ ಎಲ್ಲಾ ಕುಳಿತು ಸವಿಯುವಂತಹ ಹಲವು ಬಗೆಯ ದೋಸೆಗಳನ್ನು ನೀವು ಸಹ ಮಾಡಿರುತ್ತೀರಿ. ಅದರಲ್ಲಿ ನಿಮಗೆ ತಂಪು ತರುವಂತಹ ಮೆಂತೆ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಇದರಿಂದ ಬಹಳ ಸುಲಭವಾಗಿ ಹಲವು ಖಾದ್ಯಗಳ ಮಾಡಿರುತ್ತೀರಿ.

ನಿಮ್ಮ ದೈನಂದಿನ ಆಹಾರದಲ್ಲಿ ಮೆಂತ್ಯ ಬಳಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಹೀಗಾಗಿ ಕೆಲವು ಔಷಧಿಗಳಲ್ಲಿಯೂ ನಾವು ಮೆಂತ್ಯ ಬಳಸುವುದು ನೋಡಬಹುದು. ನಾವಿಂದು ಇಂತಹ ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಈ ಮೆಂತ್ಯದಿಂದ ಮಾಡುವ ದೋಸೆಯ ಕುರಿತು ತಿಳಿಯೋಣ. 

ಮೆಂತ್ಯ ದೋಸೆ ಮಾಡಲು ಬೇಕಾಗುವ ಪದಾರ್ಥಗಳು 

ಅಕ್ಕಿ - 1 ಕಪ್ 

ಉದ್ದಿನ ಬೇಳೆ 

ಮೆಂತ್ಯ 

ಹರಳು ಉಪ್ಪು 

ಎಣ್ಣೆ 

ಮೆಂತ್ಯ ದೋಸೆ ಮಾಡುವ ವಿಧಾನ: 
ಮೊದಲು ಅಕ್ಕಿ, ಮೆಂತ್ಯ, ಉದ್ದಿನ ಬೇಳೆಯನ್ನು ತೊಳೆದು ಬೇರೆ ಬೇರೆಯಾಗಿ ನೆನೆಸಿಡಬೇಕು. 1 ಕಪ್ ಅಕ್ಕಿಗೆ 2 ಸ್ಪೂನ್ ಉದ್ದು ಹಾಗೆ 2 ಸ್ಪೂನ್ ಮೆಂತ್ಯ ಬಳಸಿ. ಹೀಗೆ 6 ಗಂಟೆ ನೆನೆಸಿಟ್ಟ ಬಳಿಕ ನೀರು ಬಸಿದು ಇಟ್ಟುಕೊಳ್ಳಿ. ಮಾರನೆ ದಿನ ಮೂರು ವಸ್ತುಗಳನ್ನು ಕೂಡ ಬೇರೆ ಬೇರೆಯಾಗಿ ರುಬ್ಬಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡುವಾಗ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. 

ಈ ಹಿಟ್ಟನ್ನು ಮುಚ್ಚಳ ಮುಚ್ಚಿ 1 ರಾತ್ರಿ ಸಂಪೂರ್ಣ ಹದ ಬರಲು ಬಿಡಿ. ಈಗ ಬೇಕಾದರೆ ನೀವು ಚಿಟಿಕೆಯಷ್ಟು ಸೋಡಾ ಹಾಕಿಕೊಳ್ಳಬಹುದು, ಇಲ್ಲವೆ ಬಳಸದೆಯೂ ಇರಬಹುದು. ಈಗ ಕೈಯಿಂದ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಕಾವಲಿ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಚೆನ್ನಾಗಿ ಕಾಯಲು ಬಿಡಿ. ಕಾವಲಿ ಕಾದ ಬಳಕ ಹಿಟ್ಟನ್ನು ಹಾಕಿಕೊಂಡು ಒಂದು ಭಾಗ ಮಾತ್ರವೇ ಬೇಯಲು ಬಿಡಿ. ಈ ದೋಸೆಯನ್ನು ಎರಡು ಕಡೆ ಕಾಯಿಸುವುದು ಬೇಡ. ಒಂದು ಕಡೆ ಚೆನ್ನಾಗಿ ಕಾದ ಬಳಿಕ ಒಲೆ ಆಫ್ ಮಾಡಿಕೊಂಡರೆ ಸಾಕಾಗುತ್ತದೆ. ನಿಮ್ಮ ಮುಂದೆ ರುಚಿ ರುಚಿಯ ಮೃದುವಾದ ಮೆಂತ್ಯ ದೋಸೆ ರೆಡಿಯಾಗುತ್ತದೆ. ಇದಕ್ಕೆ ನೀವು ಮೆಂತ್ಯವನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು. ಆದ್ರೆ ಹೆಚ್ಚು ಮೆಂತ್ಯ ಬಳಸಿದರೆ ಹಿಟ್ಟು ಕಹಿ ಬರುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಅಳತೆ ಸರಿಯಾಗಿ ಮಾಡಿಕೊಳ್ಳಿ. ಈ ದೋಸೆ ದೇಹಕ್ಕೆ ಬಹಳ ತಂಪು ನೀಡಲಿದೆ.